ಕೆ.ಆರ್ ಪುರಂನಲ್ಲಿ ಲೀಲಾ ಗೆ ಹಾಡು
Posted date: 26 Thu, May 2016 – 09:44:15 AM

ರಾಯಲ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಸರ್ದಾರ್, ಷಫಿ ಹಾಗೂ ಬೀರಪ್ಪ ನಿರ್ಮಿಸುತ್ತಿರುವ ತನ್ನ ಸ್ವಾರ್ಥಕ್ಕಾಗಿ ಒಂದು ಇಡೀ ಕುಟುಂಬವನ್ನು ಕೊಲೆ ಮಾಡಿದ ಕೊಲೆಗಾರನ ಮೇಲೆ ಸೇಡು ತೀರಿಸಿಕೊಳ್ಳುವ ಮಗುವೇ ಲೀಲಾ ಇದರ ಮದ್ಯೆ ಒಂದು ನವಿರಾದ ಪ್ರೇಮ ಕಥಾ ಹೊಂದಿರುವ ಲೀಲಾ ಚಿತ್ರಕ್ಕೆ ಕಳೆದ ವಾರ ಚಿತ್ರಕ್ಕೆ ನಾಯಕ ರೋಹಿತ್, ಸೀನು, ಆಶಿಕ್, ಸಿದ್ದು ಹಾಗೂ ನೃತ್ಯ ಕಲಾವಿದರ ಅಭಿನಯದಲ್ಲಿ ಈ ಲೈಪಿಗೆ ನಾನೇ ಸುಲ್ತಾನ ಈ ಪ್ರೀತಿಗೆ ನಾನಂತೂ ದಿವಾನ ಎಂದು ಹಾಡಿ ಕುಣಿಯುವ ದೃಶ್ಯವನ್ನು ಕೆ.ಆರ್.ಪುರಂ ಎಸ್.ಜೆ.ಇ.ಎಸ್. ಕಾಲೇಜಿನಲ್ಲಿ ಮನು ನೃತ್ಯ ನಿರ್ದೇಶನದಲ್ಲಿ ಚತ್ರೀಕರಿಸಿಕೊಳ್ಳಲಾಯಿತು. ಈಗಾಗಲೇ ಪ್ರಥಮ ಪ್ರತಿ ಸಿದ್ದವಾಗಿದ್ದು ಸದ್ಯದಲ್ಲೇ ಸೆನ್ಸಾರ್ ಮಂಡಳಿಗೆ ಹೋಗಲಿದೆ.
ಎಲ್.ಎಂ.ಗೌಡ ಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ರಾಜು ಶಿರಾ ಛಾಯಾಗ್ರಹಣ, ಶ್ರೀ ಹರ್ಷ ಸಂಗೀತ, ಮಂಜುನಾಥ್ ಎಂ.ಎನ್.ಹಳ್ಳಿ ಚಿತ್ರಕಥೆ ಮತ್ತು ಸಂಭಾಷಣೆ, ಶ್ರೀ ತೇಜ ಸಾಹಿತ್ಯ, ಮನು,ಶಂಕರ್, ಸಂದೀಪ್ ನೃತ್ಯ ನಿರ್ದೇಶನ, ಥ್ರಿಲ್ಲರ್ ಮಂಜು ಸಾಹಸ, ಕುಮಾರ್ ಸಿ.ಹೆಚ್ ಸಂಕಲನವಿದೆ, ರೋಹಿತ್, ಅಲ್ಮಾಸ್, ಆಶಿಕ್, ಆದಿಲೋಕೆಶ್, ಶೋಭರಾಜ್, ಸಂತೋಷ್, ಶಫೀ, ನಾಗೇಂದ್ರ, ವೆಂಕಟರಮಣಪ್ಪ, ಶಂಕರ್‌ಭಟ್, ಸೀನು, ಸೋನು, ವೆಂಕಟೇಶಪ್ಪ, ಆಶಿನಿ, ಬೀರಪ್ಪ ತಾರಾ ಬಳಗದಲ್ಲಿದ್ದಾರೆ.  

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed